ಟೊಮ್ಯಾಟೊ ಬೆಳೆಯಲ್ಲಿ ಊಜಿ ಕೀಟದ ಹಾನಿಯ ಲಕ್ಷಣ ಹಾಗು ಹತೋಟಿ ಕ್ರಮಗಳು

  • , by Agriplex India
  • 1 min reading time

ಹಾನಿಯ ಲಕ್ಷಣ

ಈ ಕೀಟದ ಮರಿಕೀಟವು ಎಲೆಗಳ ಮೇಲೆ ಸುರಂಗ ಮಾಡಿ ದೊಡ್ಡದಾದ ದ್ವಾರಗಳನ್ನುಂಟು ಮಾಡುತ್ತವೆ ಹಾಗೂ ಹಣ್ಣುಗಳಲ್ಲಿ ರಂಧ್ರ ತೋಡುವುದರಿಂದ ಹೆಚ್ಚಿನ ನಷ್ಟವು ಉಂಟಾಗುತ್ತದೆ.

ನಾಟಿಯ ಸಮಯದಿಂದ ಹಣ್ಣು ಕಟಾವಾಗುವ ತನಕವು ಈ ಕೀಟವು ಬೆಳೆಗೆ ಬಾಧಿಸುವುದರಿಂದ ಟೊಮ್ಯಾಟೊ ಬೆಳೆಗೆ ಮಾರಕವಾಗಿದೆ.

ಈ ಕೀಟವು ಟೊಮ್ಯಾಟೊ ಗಿಡದ ಕುಡಿ, ಎಲೆ, ಕಾಂಡ, ಹೂ ಮತ್ತು ಹಣ್ಣುಗಳಿಗೆ ಭಾದಿಸುವುದಲ್ಲದೆ ಬಾಧೆಗೊಳಗಾದ ಭಾಗಗಳಲ್ಲಿ ಕಪ್ಪು ಬಣ್ಣದ ಮರಿಕೀಟದ ಹಿಕ್ಕೆ ಕಾಣಬಹುದು.

ಈ ಕೀಟಕ್ಕೆ ಶೇಕಡ 100 % ಬೆಳೆ ನಷ್ಟ ಮಾಡುವ ಸಾಮರ್ಥ್ಯವಿದೆ.

ಈ ಕೀಟದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿದ್ದು ಒಂದು ವರ್ಷಕ್ಕೆ 10-12 ಪೀಳಿಗೆಯನ್ನು ಹೊಂದಿರುತ್ತದೆ.

ಹತೋಟಿ ಕ್ರಮಗಳು

ಮುಂಜಾಗ್ರತೆಯಾಗಿ ನಾಟಿಯ ಸಮಯದಲ್ಲಿ ಅಥವಾ ನಾಟಿಗೆ ಮುಂಚೆಯೇ ಬೆಳೆ ಪ್ರದೇಶದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.

ನಾಟಿಯ ನಂತರ ಬೆಳೆಪ್ರದೇಶವು ಕಳೆ ಮತ್ತು ಗಿಡಗಳ ಅವಶೇಷಗಳಿಂದ ಮುಕ್ತವಾಗಿರಬೇಕು. ಬೆಳೆಯ ಕಟಾವಿನ ತನಕ ಬೆಳೆ ಪ್ರದೇಶದ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

ನಾಟಿಯ ಮುಂಚೆ ಬೆಳೆ ಪ್ರದೇಶದ ಗಡಿಭಾಗದ ಸುತ್ತಲೂ 40 ಮೆಶ್‍ನ ನೈಲಾನ್ ನೆಟ್ ಹಾಕುವುದು ಅಥವಾ ಗಿಡ ನಾಟಿ ಮಾಡುವ 15 ದಿನಗಳ ಮೊದಲು ಗಡಿ ಭಾಗದ ಸುತ್ತ 2 ಸಾಲಿನಲ್ಲಿ ಮೇವಿನ ಜೋಳದ ಬೀಜ ಬಿತ್ತುವುದು ಅಥವಾ ಗಡಿಭಾಗದಲ್ಲಿ ಚೆಂಡು ಹೂವು ಬೆಳೆಸುವುದು ಸೂಕ್ತ.

ಮೋಹಕ ಬಲೆ: ಮಾರುಕಟ್ಟೆಯಲ್ಲಿ ಲಭ್ಯವಿರುವ ಟುಟಾಸಾನ್ ಅಥವಾ ಟುಟಾ ಟ್ರ್ಯಾಪ್ ಎಂಬ ಕೆಂಪು ಬಣ್ಣದ ಮೋಹಕ ನೀರಿನ ಬಲೆಯಿಂದ ಈ ಕೀಟವನ್ನು ಹತೋಟಿಯಲ್ಲಿಡಬಹುದು. ಟುಟಾಸಾನ್ ಎಂಬ ಮೋಹಕ ನೀರಿನ ಬಲೆಯನ್ನು ಖರೀದಿಸಿ ಎರಡು ಟೊಮ್ಯಾಟೊ ಸಾಲುಗಳ ಮಧ್ಯೆ 3 ರಿಂದ 4 ಅಡಿ ಎತ್ತರದಲ್ಲಿ ದಾರದಿಂದ ಟೊಮ್ಯಾಟೊ ಸಾಲುಗಳ ಕೋಲುಗಳಿಗೆ ಕಟ್ಟಬೇಕು ಹಾಗೂ ಈ ಬಲೆಗಳಿಗೆ ಟುಟಾ ಲ್ಯೂರ್ ಎಂಬ ಸಣ್ಣ ಮೋಹಕ ಬಿಲ್ಲೆಯನ್ನು ಸೇರಿಸಬೇಕು. ನಂತರ ಈ ಬಲೆಗೆ 3/4 ಭಾಗದಷ್ಟು ನೀರು ಹಾಕಿ 50 ರಿಂದ 100 ಮಿಲಿಯಷ್ಟು ಹರಳೆಣ್ಣೆ ಅಥವಾ ಇಂಜಿನ್ ವೇಸ್ಟ್ ಆಯಿಲ್‍ನ್ನು ಹಾಕಬೇಕು. ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. 6 ಮೋಹಕ ನೀರಿನ ಬಲೆಯನ್ನು ಪ್ರತಿ ಎಕರೆಗೆ ಬಳಸಬೇಕು.

ಕೀಟನಾಶಕಗಳಾದ ಕ್ಲೊರಾನ್ಟ್ರಾನಿಲಿಪ್ರೊಲ್ (ಕೊರಾಜನ್), ಸ್ಪೈನೊಸಾಡ್ ಮತ್ತು ಇಂಡಾಕ್ಸಿಕಾರ್ಬ್ ಈ ಕೀಟದ ನಿಯಂತ್ರಣಕ್ಕೆ ಉತ್ತಮ ಕೀಟನಾಶಕಗಳಾಗಿವೆ.

Tags

Leave a comment

Leave a comment

Blog posts

Login

Forgot your password?

Don't have an account yet?
Create account